Loading

wait a moment

ನಟ ಯಶ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮನೆ ಮಾಲೀಕ

ಬೆಂಗಳೂರು: ನ್ಯಾಯಾಲಯದ ಸೂಚನೆ ಮೇರೆಗೆ ಶುಕ್ರವಾರ ನಟ ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕರು ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ.

ಮನೆ ಖಾಲಿ ಮಾಡುವ ಸಂದರ್ಭ ಯಶ್ ಹಾನಿ ಮಾಡಿದ್ದ ಮನೆಯ ವಸ್ತುಗಳನ್ನು ರಿಪೇರಿ ಮಾಡಲು ತಗುಲುವ ವೆಚ್ಚ ಪರಿಗಣಿಸಿ ಮನೆ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ. ಮನೆ ಖಾಲಿ ಮಾಡುವ ವೇಳೆ ವಾರ್ಡ್​ರೋಬ್, ಬಾಗಿಲು, ಕಮೋಡ್, ಕಿಚನ್​ನಲ್ಲಿನಲ್ಲಿ ಅಳವಡಿಸಿದ್ದ ಕೆಲ ವಸ್ತುಗಳು, ಲೈಟಿಂಗ್ಸ್ ಸೇರಿ ಕೆಲ ವಸ್ತುಗಳನ್ನು ಒಡೆದು ಹಾಕಲಾಗಿದೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.

2 ತಿಂಗಳ ಹಿಂದೇಯೇ ಮನೆ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ, ಹಾಸನದಲ್ಲಿ ಮನೆ ನಿರ್ವಿುಸುತ್ತಿರುವುದರಿಂದ ಕಾಲವಕಾಶಬೇಕು ಎಂದು ಯಶ್ ತಾಯಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮೇ 31ರ ವರೆಗೆ ಹೈ ಕೋರ್ಟ್ ಕಾಲವಕಾಶ ನೀಡಿತ್ತು. ಆದರೆ, ಯಶ್ ಕುಟುಂಬ ಜೂ.7ರಂದು ಮನೆ ಖಾಲಿ ಮಾಡಿತ್ತು. ಇದೀಗ ಯಶ್ ಮತ್ತೊಂದು ಕಾನೂನು ಸಂಕಷ್ಟ ಎದುರಿಸಬೇಕಾಗಿದೆ.

Leave a Reply

Your email address will not be published. Required fields are marked *