Loading

wait a moment

Month: June 2019

ಇಂದಿನ ಇಂಡೋ-ಅಂಗ್ಲೋ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯ

ಲಂಡನ್: ಇಂದು ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯವಾಗಿದೆ. ಇದಕ್ಕೆ ಕಾರಣ ಇವತ್ತಿನ ಪಂದ್ಯವನ್ನು ಮಕ್ಕಳಿಗೆ ಅರ್ಪಣೆ ಮಾಡಲಾಗಿದೆ. ಹೌದು ಇಂದಿನ ಪಂದ್ಯವನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್) ನೂತನವಾಗಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನ ಎಂಬ ಕಾರ್ಯಕ್ರಮದ ಅಂಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು Read More

ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡ ನರ್ಸ್

ಜೈಪುರ್: ಮಹಿಳಾ ನರ್ಸ್ ಒಬ್ಬರು ಎಐಐಎಂಎಸ್(ಏಮ್ಸ್) ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜೋಧಪುರ್‌ನಲ್ಲಿ ನಡೆದಿದೆ. ಕೇರಳ ಮೂಲದ ಬಿಜು ಪುನೋಜ್ ಆತ್ಮಹತ್ಯೆಗೆ ಶರಣಾದ ನರ್ಸ್. ಬಿಜು ಕಳೆದ ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಟ್ಟಡದ ಮೂರನೇ ಮಹಡಿಯಲ್ಲಿರುವ ರೂಮಿನಿಂದ ಹೊಗೆ ಬರುತ್ತಿದ್ದಾಗ ದಾರಿಹೋಕರೊಬ್ಬರು ಗಮನಿಸಿ ತಕ್ಷಣ Read More

KSRTC ನೌಕರರಿಗೆ ಬಂಪರ್ ಆಫರ್

ಬೆಂಗಳೂರು (ಜೂ.30) : ರಾಜ್ಯ ಸರ್ಕಾರದ ಕುಟುಂಬ ಯೋಜನೆಯನ್ನು ಉತ್ತೇಜಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ನೌಕರರಿಗೆ ‘ವಿಶೇಷ ವೇತನ ಬಡ್ತಿ’ ನೀಡುವುದಕ್ಕೆ ಮುಂದಾಗಿದೆ. ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದು, ಎರಡು ವರ್ಷದಿಂದ ಈಚೆಗೆ ಸಂತಾಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು (ಪತಿ ಅಥವಾ ಪತ್ನಿ) ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗಿರುತ್ತಾರೆ. Read More

ಸರ್ಕಾರ ನಡೆಸುತ್ತಿರೋನು ನಾನಲ್ಲ -ಮೈತ್ರಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ

ವಿಜಯಪುರ: ಮೈತ್ರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದೀರಿ ಯಾಕೆ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆಗ ಸರ್ಕಾರ ನಡೆಸುತ್ತಿದ್ದವನು ನಾನು ಅದಕ್ಕೆ ಮಾತನಾಡುತ್ತಿದೆ. ಈಗ ನಾನು ಕೇವಲ ಸಮನ್ವಯ ಸಮಿತಿ ಅಧ್ಯಕ್ಷ ಅಷ್ಟೇ. Read More

ದೇವೇಗೌಡ್ರು ಚುನಾವಣೆಗೆ ನಿವೃತ್ತಿ, ರಾಜಕೀಯಕ್ಕಲ್ಲ..!

ಜೆಡಿಎಸ್​ ವರಿಷ್ಠ ಎಚ್.ಡಿ.ದೇವೇಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಆದ್ರೆ ಸಕ್ರಿಯಾವಾಗಿ ರಾಜಕೀಯದಲ್ಲಿ ಬೆಂಗಳೂರು, [ಜೂ.29]: ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್ ​.ಡಿ.ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸಕ್ರಿಯಾವಾಗಿ ರಾಜಕೀಯದಲ್ಲಿ ಇರಲು ಗೌಡ್ರು ಇಚ್ಛಿಸಿದ್ದು, ಚುನಾವಣೆ ಸ್ಪರ್ಧೆಯಿಂದ ಮಾತ್ರ ಹಿಂದೆ ಸರಿದಿದ್ದಾರೆ. ಇಂದು [ಶನಿವಾರ] ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ್ರು, ನನ್ನ ರಾಜಕೀಯ ಜೀವನದಲ್ಲಿ ಎಂದೂ Read More

ಕಾಂಗ್ರೆಸ್‌ಗೆ ಮೋದಿ ಪಂಚ್: ಪ್ರಧಾನಿಯ ಒಂಭತ್ತು ಏಟಿಗೆ ‘ಕೈ’ ಫುಲ್ ಸುಸ್ತು!

ನವದೆಹಲಿ[ಜೂ.26]: ಪ್ರಧಾನಿ ನರೇಂದ್ರ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನದ ವೇಳೆ ಕಾಂಗ್ರೆಸ್ ನಾಯಕರನ್ನು ಭರ್ಜರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಂಗಳವಾರ ಭಾಷಣ ಮಾಡಿದ ಪ್ರಧಾನಿ ಮೋದಿ, ತುರ್ತುಪರಿಸ್ಥಿತಿ, ಹಿರಿಯ ನಾಯಕರಿಗೆ ಗೌರವ ಸಲ್ಲಿಸದ ಕಾಂಗ್ರೆಸ್‌ನ ಪರಿಪಾಠ, ಕೇವಲ ಗಾಂಧೀ ನೆಹರೂ ಕುಟುಂಬದ ಓಲೈಕೆ, ತ್ರಿವಳಿ ತಲಾಖ್ Read More

ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

ಬೆಂಗಳೂರು: ಸದಾ ಚಿತ್ರರಂಗದ ಇತರರ ಕೆಲಸ ಕಾರ್ಯಗಳತ್ತಲೂ ಒಂದು ಕಣ್ಣಿಟ್ಟು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದ ಸ್ನೇಹಶೀಲ ವ್ಯಕ್ತಿತ್ವ ರೆಬೆಲ್ ಸ್ಟಾರ್ ಅಂಬರೀಶ್ ಅವರದ್ದು. ಅವರ ಪುತ್ರ ಅಭಿಷೇಕ್ ಕೂಡಾ ಅಂಥಾದ್ದೇ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಸ್ನೇಹಕ್ಕೆ ಸೋಲುವ ಸ್ವಭಾವದ ಅಭಿಷೇಕ್ ಇದ್ದಕ್ಕಿದ್ದಂತೆ ನಟಭಯಂಕರ ಶೂಟಿಂಗ್ ಸ್ಪಾಟಿಗೆ ಭೇಟಿ ನೀಡಿ ನಿರ್ದೇಶಕ ಕಂ ನಾಯಕ ಪ್ರಥಮ್‍ಗೆ ಸರ್‌ಪ್ರೈಸ್‌ Read More

ಹೈದ್ರಾಬಾದ್‌ನಲ್ಲಿ 1 ಲೀಟರ್‌ ಪೆಟ್ರೋಲ್‌ಗೆ ಕೇವಲ 40 ರೂಪಾಯಿ!, ಪ್ಲಾಸ್ಟಿಕ್ ಬಳಸಿ ಉತ್ಪಾದನೆ!

ಹೈದರಾಬಾದ್[ಜೂ.26]: ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿರುವ ಹೊತ್ತಿನಲ್ಲಿ, ಹೈದ್ರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಅನ್ನು ಲೀ.ಗೆ ಕೇವಲ 40 ರು.ಗೆ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ.ಗೆ 73 ರು. ಇದೆ. ಅಂದರೆ ಸುಮಾರು 33 ರು. ಕಡಿಮೆ ಹೌದು. ಹೈದರಾಬಾದ್ ಮೂಲದ ಮೆಕಾನಿ ಲ್ ಎಂಜಿನಿಯರ್ ಒಬ್ಬರು ಪ್ಲಾಸ್ಟಿಕ್ ಅನ್ನು ಇಂಧನವಾಗಿ Read More

ಬ್ರಿಟನ್‍ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‍ಗೆ ಸ್ಥಾನ

ಲಂಡನ್: ಬ್ರಿಟನ್-ಇಂಡಿಯಾ ಸಂಬಂಧವನ್ನು ಮುನ್ನಡೆಸುತ್ತಿರುವ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ನಿರ್ಮಲಾ ಸೀತಾರಾಮನ್ ಕೇಂದ್ರ ರಕ್ಷಣಾ ಮಂತ್ರಿಯಾಗಿದ್ದಾಗ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಲಂಡನ್‍ನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ Read More

ಗುರುವಾರ KSRTC, BMTC ಬಸ್ ಸಂಚಾರ ಸ್ಥಗಿತ..?

ಬೆಂಗಳೂರು, (ಜೂ.26): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರ ಸಂಘಟನೆಯೊಂದು ನಾಳೆ (ಗುರುವಾರ) ಬಂದ್ ಕರೆ ನೀಡಿದೆ.  ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಬೆಂಗಳೂರು ಚಲೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಸಿ ಬಸ್‍ ಸಂಚಾರ ಇರುತ್ತಾ ಅಥವಾ ಇರುವುದಿಲ್ಲ ಎನ್ನುವ ಗೊಂದಲ ಸಾರ್ವಜನಿಕರಲ್ಲಿದೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಇಲಾಖೆ ಅಧಿಕರಿಗಳು, ಗುರುವಾರ Read More